

ಆತ್ಮೀಯ ಬಂದುಗಳೇ, ನಮಸ್ಕಾರ,
" ಇಂತವಳಿಗಿಂಥವನು ಎಂಬ ನಿಯಮವೇ ಇಲ್ಲ,
ಎಂಥವನಿಗಾಗಿಯೂ ಕಾಲ ನಿಲ್ಲುವುದಿಲ್ಲ,
ಸಂಪಿಗೆಯ ಮರದಲ್ಲಿ ಮಲ್ಲಿಗೆ ಬಿಡುವುದಿಲ್ಲ ,
ಇದು ಎಂಥ ಚೆಲುವೋ ನಾ ಕಾಣೆ ,ದೇವರು ಬಲ್ಲ "
ಇವು ಪ್ರೀತಿಯ ಕವಿ ,ಪ್ರೇಮ ಕಾವ್ಯದ ಅಧಿಪತಿ , "ಕೆ. ಎಸ್. ನ " ರವರ ಅಣಿಮುತ್ತುಗಳು.
" ಮದುವೆ " ಎನ್ನುವ ಮೂರಕ್ಷರ ಬದುಕಿನ ಮಹತ್ವದ ಘಟ್ಟ .ಈ ಬದುಕಿನ ತಿರುವಿಗೆ ಕಾರಣ " ಹರೆಯ ", ಈ ಹ
ರೆಯ ಕ್ಕೆ ಆಧಾರ "ಪ್ರೇಮ " . ಪ್ರೇಮ , ಒಂದು ಸುಂದರ ಸಂವೇದನೆ, ಅದ್ಬುತವಾದ ಅನುಭವ. ಜೀವನವನ್ನು ಬಹು ಭಾಗ ರಂಜಿಸುವ ಶಕ್ತಿ ಪ್ರೆಮಕ್ಕಿದೆ. ಇಂತಹ ಪ್ರೇಮಮಯ ಜೀವನಕ್ಕೆ " ಮದುವೆ" ಯೇ ಸೇತುವೆ. ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. " ಮದುವೆ ಮಾಡಿ ನೋಡು ,ಮನೆ ಕಟ್ಟಿ ನೋಡು " ಎಂಬ ಗಾದೆ ಮಾತಿದೆ. ಮದುವೆ ಮಾಡಿಸುವ ಕಾರ್ಯ ಅದೊಂದು ಪುಣ್ಯ . ಹೆಣ್ಣು , ಗಂಡಿನ ಮದ್ಯದ ಆಕರ್ಷಣೆಗೆ ಸೇತುವಾಗಿ " ಮದುವೆ " ನಿಲ್ಲುತ್ತದೆ. ಹೆತ್ತವರು , ಒಡಹುಟ್ಟಿದವರು,ಬಂಧು ಗಳಿಂದ ದೂರವಾಗಿ ಹೋಗಿ ತಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು , "ನಾನು ಬಡವ, ನೀನು ಬಡವಿ, ಒಲವೆ ಬದುಕು" ಎಂದು ಹಾಡಿ, ನೆನಪುಗಳ ಗೂಡು ಕಟ್ಟಿಕೊಂಡು ಬದುಕುವ ವೇದಿಕೆಗೆ ಮುನ್ನುಡಿಯಾಗಲು " ಮಧುರ ಮೈತ್ರಿ " ಜನ್ಮ ತಾಳಿದೆ.ನಮ್ಮದೇ ಆದ ಹಲವು ಗೆಳೆಯ , ಗೆಳತಿಯರ ಮದ್ಯೆ " ಮದುವೆ " ಎಂಬ ಮಂಗಳ ಕಾರ್ಯಕ್ಕೆ ಸೂತ್ರದಾರಿ ಯಾಗಿ " ಮಧುರ ಮೈತ್ರಿ " ಸೇತುವೆ ಯಾಗಿ ಕಾರ್ಯ ನಿರ್ವಹಿಸುತ್ತದೆ. * ಮದುವೆಯಾಗಬಯಸುವ ಗೆಳೆಯ , ಗೆಳತಿಯರು maduramaitri@gmail.com ಗೆ ನಿಮ್ಮ ಸ್ವವಿವರಗಳು , ಭಾವಚಿತ್ರದೊಂದಿಗೆ ಮಿಂಚೆ ಕಳುಹಿಸಿ. ವದು ,ವರರ ನಡುವೆ ಸೇತುವಾಗಿ ನಾವು ಸಂವಹನ ನಡೆಸುತ್ತೇವೆ.
* ಸೇವಾ ಶುಲ್ಕವಾಗಿ ರೂ :100/-ಗಳನ್ನೂ ಮಿಂಚೆ ಯೋಟ್ಟಿಗೆ ಕಳುಹಿಸಬೇಕು.
* ವದು , ವರರ ಅಥವಾ ಅವರ ಕಡೆಯವರ ಒಪ್ಪಿಗೆ ಪಡೆದೆ ನಾವು ಮುಂದಿನ ಸಂವಹನ ನಡೆಸುತ್ತೆವೆ.
* ನಮ್ಮದೇ ಆದ ಬ್ಲಾಗ್ ನಲ್ಲಿ ವದು, ವರರ ವಿವರಗಳನ್ನು ಅವರ ಒಪ್ಪಿಗೆ ಮೇರೆಗೆ (ವಿಳಾಸ, ದೂರವಾಣಿ , ಮಿಂಚೆ ವಿಳಾಸ ಹೊರತು ಪಡಿಸಿ ) ಸಂಕ್ಷಿಪ್ತವಾಗಿ ಪ್ರಕಟಿಸಲಾಗುವುದು .
* ಕೇವಲ ವದು , ವರರ ಸಂಪರ್ಕ , ಪರಿಚಯ , ವಸ್ಟೇ ವೇದಿಕೆಯ ಜವಾಬ್ದಾರಿ. ಮುಂದಿನ ಆಗು ಹೋಗುಗಳಿಗೆ ವೇದಿಕೆ ಜವಾಬ್ದಾರಿಯಾರಿರುವುದಿಲ್ಲ .

